ಗಾಳಿಪಟ
Thursday, 17 June 2021
ಕನಸುಗಳು
ನೋವಿನಲ್ಲು ನಗುವ, ನಿನ್ನ ಮುದ್ದು ಮೊಗವ
ಕಾಣಲೆಂದೆ ಚಂದ್ರ, ತಾ ಮೋಡವೇರಿ ಬರುವ
ಕಳೆದುಹೋದ ಕನಸುಗಳ ಲೆಕ್ಕವನ್ನು ಇಡುವ
ಪಾಪ ಹುಚ್ಚರಿವರು ಎಂದು ಒಳಗೊಳಗೆ ನಗುವ
ಸೋಲು
ಸೋಲು ಸಹಜ, ಪ್ರಯತ್ನ ಅನಿವಾರ್ಯ
ಪ್ರಯತ್ನ ಸಹಜ, ನೋವು ಅನಿವಾರ್ಯ
ನೋವು ಸಹಜ, ನಗು ಅನಿವಾರ್ಯ
ನಗು ಸಹಜ, ಕನಸು ಅನಿವಾರ್ಯ
ಕನಸು ಸಹಜ, ಬದುಕು ಅನಿವಾರ್ಯ
ಬದುಕು ಸಹಜ, ಸಾವು ಅನಿವಾರ್ಯ
Thursday, 29 May 2014
ಹೆಂಡತಿ
ಮದುವೆಯಾದ ಹೊಸತರಲ್ಲಿ
ಹೆಂಡತಿ ಎಂದರೆ ಅದ್ಭುತ ...
ಕೆಲವು ವರ್ಷಗಳ ನಂತರ
ಹೆಂಡತಿ ಎಂದರೆ ಅದು ಭೂತ ....
Sunday, 30 September 2012
ಏಕಾಂಗಿ
ದೀಪಗಳ ಸಾಲಿನಲಿ ಬೆಳಕಿಲ್ಲ,
ಸಂಪಿಗೆಯ ತೋಟದಲಿ ಘಮವಿಲ್ಲ,
ಎಣ್ಣೆ ಇಲ್ಲದ ದೀಪ, ಜೀವವಿಲ್ಲದ ದೇಹ,
ಹುಣ್ಣಿಮೆಯ ರಾತ್ರಿಯಲಿ ಚಂದಿರನ ಹುಡುಕಾಟ,
ಬಳಿ ಇದ್ದು ಬಹುದೂರ ನೀನೀಗ,
ಜೊತೆ ಇದ್ದು ಏಕಾಂಗಿ ನಾನಾಗ...
Tuesday, 28 August 2012
ಶಾರ್ಕು
ಪ್ರೀತಿಯೆಂಬ ಸಾಗರಕ್ಕೆ
ಮನವು ನನ್ನ ಸೆಳದಿದೆ,
ಅದರ ಒಳಗೆ ಅವಿತು ಕುಳಿತ
ಶಾರ್ಕು ನೀನು ಎಂದು
ಪಾಪ ಅದಕೆ ತಿಳಿಯದೆ.
Thursday, 5 April 2012
ಗರ್ಭಪಾತ
ಬದುಕಲು ಸಾವಿರ ಕಾರಣ ಬೇಕು,
ಮರಣಕೆ ಅವಳ ನೆನಪೆ ಸಾಕು.
ಸುಂದರ ಸುಮಧುರ ನೆನಪಿನ ಜಾತ್ರೆ,
ನಲ್ಲೆಯ ಜೊತೆಗಿನ ಪ್ರೀತಿಯ ಯಾತ್ರೆ.
ನೆದಿರೆಯ ಮರೆತು ರಾತ್ರಿಯ ಕಳೆದೆ,
ಕನಸಿನ ಕೂಸಿಗೆ ಬಣ್ಣವ ಬಳಿದೆ.
ರಾತ್ರಿಯು ಕಳೆದು ಬೆಳಕು ಹರಿಯೆ
ಕನಸಿನ ಕೂಸಿಗೆ ಗರ್ಭಪಾತ.
ಮಳೆ
ಪ್ರೇಮಿಗಳಿಗೆ;
ಗುಡುಗು, ಮಿಂಚು, ಮೋಡ, ಮಳೆ,
ಮುಗಿಲು ಧರೆಗೆ ಮುತ್ತಿಕುವ ಹಾಗೆ,
ವಿರಹಿಗಳಿಗೆ;
ಮೌನ ಮುರಿದು ಭೋರಿಟ್ಟು ಅಳುವ
ವರುಣ ದೇವನ ಕಣ್ಣೀರ ದಾರೆ.
ಬೇಸಿಗೆ
ಮುಂಜಾನೆ ಮುಸ್ಸಂಜೆ
ಸೂರ್ಯ ತಂಪು ತಂಪು,
ಮಧ್ಯಾನ ತಾಪಕ್ಕೆ
ನಾವೆಲ್ಲ ಕೆಂಪು ಕೆಂಪು.
Older Posts
Home
Subscribe to:
Posts (Atom)