Wednesday 3 August, 2011

ಅನಾವರಣ E-TV ಕನ್ನಡ 08:30pm to 09:00pm

ಕತ್ತಲ ಕರಿತೆರೆ, ಬೆಳಕಿನ ಕರದಲಿ, ನೇಸರ ಸರಿಸಿರೆ ಪ್ರಕೃತಿ ಅನಾವರಣ.
ಮೊಗ್ಗು ತಾನಾಗಿಯೇ, ತುಟಿದಳ  ತೆರೆದರೆ, ಗಲ್ಲನೆ ನಕ್ಕರೆ ಎಲ್ಲೆಡೆ ಗಂಧದನಾವರಣ. .
ಕಬ್ಬಿನ ಸಿಹಿರಸ ಕಮರಿ ಕಾಕಂಬಿ ಜೊಳ್ಳುತೆನೆ ನೀರ್ಬೀಜ ಹಣ್ಣು,
ಚಿನ್ನಕೆ ಅನ್ನ ಹಣಕ್ಕೆ ಬದುಕು ಮೆದುಳಿಗೆ ಹೃದಯದ ಒತ್ತೆ  ಇದು ಮೌಡ್ಯದನಾವರಣ.
ನಗರದ ಜಗಮಗ, ಕೃತಕ ಬೆಳಕಲ್ಲಿಯೇ, ಸೋಗಿನ ನಗೆ ಹುನ್ನಾರದ  ಬಗೆ ಬಗೆ, ವಿಕೃತಿ ಅನಾವರಣ.


Thursday 19 May, 2011

ಕಪ್ಪು ಬಿಳುಪು

ಕನಸಿನಲ್ಲಿ ಕಣ್ಣ ಒಳಗೆ ಕಲರು
ಕಣ್ಣ ಬಿಟ್ಟು ನೋಡಲೆಲ್ಲ ಕಳ್ಳರು
ಮುಗಿಲ ಮೇಲೆ ಏಳು ಬಣ್ಣ ರಾಯರೇ 
ಕಪ್ಪು ಬಿಳುಪು ಬದುಕು ನಂದು ದೇವರೇ 

Wednesday 18 May, 2011

ಹೆಂಡತಿ

ಬಾನಿನಲ್ಲಿ ಪೂರ್ಣ ಚಂದ್ರ ಕಂಡರೆ,
ಅಂದು ರಾತ್ರಿ ನನಗೆ ತುಂಬಾ ತೊಂದರೆ.
ತುಂಡು ಚಂದ್ರ ಹಾಗೆ ಒಮ್ಮೆ ನಕ್ಕರೆ,
ತೋರುತಾಳೆ ಚೂರು ಪಾರು ಅಕ್ಕರೆ.
ಕಾಣದಂತೆ ಚಂದ್ರ ಕಾಣಿಯಾದರೆ,
ಇವಳ ಕಾಟ ತಾಳಲಾರೆ ದೇವರೇ..........
ಗ್ರಹಣವೆಂಬ ಭೂತ ಎದುರು ಬಂದರೆ
ಇವಳು ಆಗ ಶುದ್ದ ಭದ್ರಕಾಳಿಯೇ,
ಎದುರು ಬರಲಿ ವೀರ ಧೀರ ಶುರರೆ
ಮಣ್ಣಿನಲ್ಲಿ ಮಣ್ಣು ಆದ ಆಗೆಯೇ....