ಕತ್ತಲ ಕರಿತೆರೆ, ಬೆಳಕಿನ ಕರದಲಿ, ನೇಸರ ಸರಿಸಿರೆ ಪ್ರಕೃತಿ ಅನಾವರಣ.
ಮೊಗ್ಗು ತಾನಾಗಿಯೇ, ತುಟಿದಳ ತೆರೆದರೆ, ಗಲ್ಲನೆ ನಕ್ಕರೆ ಎಲ್ಲೆಡೆ ಗಂಧದನಾವರಣ. .
ಕಬ್ಬಿನ ಸಿಹಿರಸ ಕಮರಿ ಕಾಕಂಬಿ ಜೊಳ್ಳುತೆನೆ ನೀರ್ಬೀಜ ಹಣ್ಣು,
ಚಿನ್ನಕೆ ಅನ್ನ ಹಣಕ್ಕೆ ಬದುಕು ಮೆದುಳಿಗೆ ಹೃದಯದ ಒತ್ತೆ ಇದು ಮೌಡ್ಯದನಾವರಣ.
ನಗರದ ಜಗಮಗ, ಕೃತಕ ಬೆಳಕಲ್ಲಿಯೇ, ಸೋಗಿನ ನಗೆ ಹುನ್ನಾರದ ಬಗೆ ಬಗೆ, ವಿಕೃತಿ ಅನಾವರಣ.
ನಗರದ ಜಗಮಗ, ಕೃತಕ ಬೆಳಕಲ್ಲಿಯೇ, ಸೋಗಿನ ನಗೆ ಹುನ್ನಾರದ ಬಗೆ ಬಗೆ, ವಿಕೃತಿ ಅನಾವರಣ.
No comments:
Post a Comment