Thursday, 17 June 2021

ಕನಸುಗಳು

ನೋವಿನಲ್ಲು ನಗುವ, ನಿನ್ನ ಮುದ್ದು ಮೊಗವ
ಕಾಣಲೆಂದೆ ಚಂದ್ರ, ತಾ ಮೋಡವೇರಿ ಬರುವ
ಕಳೆದುಹೋದ ಕನಸುಗಳ ಲೆಕ್ಕವನ್ನು ಇಡುವ
ಪಾಪ ಹುಚ್ಚರಿವರು ಎಂದು ಒಳಗೊಳಗೆ ನಗುವ

ಸೋಲು

ಸೋಲು ಸಹಜ, ಪ್ರಯತ್ನ ಅನಿವಾರ್ಯ
ಪ್ರಯತ್ನ ಸಹಜ, ನೋವು ಅನಿವಾರ್ಯ
ನೋವು ಸಹಜ, ನಗು ಅನಿವಾರ್ಯ
ನಗು ಸಹಜ, ಕನಸು ಅನಿವಾರ್ಯ
ಕನಸು ಸಹಜ, ಬದುಕು ಅನಿವಾರ್ಯ
ಬದುಕು ಸಹಜ, ಸಾವು ಅನಿವಾರ್ಯ