Friday, 3 December 2010

ಉಪ್ಪಿ ಎಡವಿದ್ದೆಲ್ಲಿ.....?





ಮೊದಲಿಗೆ ಈ ಸಿನಿಮಾದಲ್ಲಿ ಚೆನ್ನಗಿರುವ ಅಂಶಗಳ ಬಗ್ಗೆ ಹೇಳೋದಾದ್ರ ಅದು Title Card ಒಂದೇ, ಅದರಲ್ಲಿರೋ ಉಪ್ಪಿಯ creativity ಸಿನೆಮಾದಲ್ಲಿ ಇಲ್ಲ. ತನ್ನದೇ ಮೂರು ಸಿನಿಮಾ ಸೇರಿಸಿ ಅದೊಕೊಂದು ಹೊಸ climax ಕೊಟ್ಟಿದಾರೆ ಉಪ್ಪಿ. ಮೊದಲ ಸ್ವಲ್ಲ್ಪ ಹೊತ್ತು ಉಪೇಂದ್ರ ಸಿನಿಮಾ ನೋಡಿದಾಗೆ ಹಾಗುತ್ತೆ, ಆಮೇಲೆ ಓಂ ನೆನಪಾಗುತ್ತೆ, interval ನಂತರ A ಕಣ್ಮುಂದೆ ಬರುತ್ತೆ. ಸಿನಿಮಾದ Theme ಚೆನ್ನಾಗಿದೆ ಆದರೆ ಅದೊಕೊಂದು ಕಥೆಯ ರೂಪ ಕೊಡೋದರಲ್ಲಿ ಉಪ್ಪಿ ಎಡವಿದ್ದಾರೆ. ಹಾಡುಗಳಲ್ಲಿ English, Hindi ಚಿತ್ರದ tunes ಗಳು ನುಸುಳಿದೆ, ಸಾಹಿತ್ಯ ಕೂಡ ಚೆನ್ನಾಗಿಲ್ಲ, ಎಲ್ಲಕಿಂತ ಮುಖ್ಯವಾಗಿ ಸಿನೆಮಗೊಂದು Flow ಇಲ್ಲ. ಉಪ್ಪಿ ಚಿತ್ರ ಕಥೆಯ ಹಂತದಲ್ಲೇ ಎಡವಿದ್ದಾರೆ. ಆದರೆ ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿದೆ, ಸಾಕಷ್ಟು ದುಡ್ಡು ಖರ್ಚುಮಾಡಿರೋದು ಕಾಣುತ್ತೆ, Hair Style really SUPER, ನಯನ ತಾರಾ ಬರಿ ಸಿನಿಮಾ ಪ್ರಚಾರಕಷ್ಟ್ತೆ ಸೀಮಿತ, ಇನ್ನು ಹೇಳೋ ಅಂಥದು ಏನು ಇಲ್ಲ, ನಿಮಗೆ ಸಾಕಷ್ಟು ಸಮಯ ಮತ್ತು ಅದಕಿಂತಲೂ ಮುಖ್ಯವಾಗಿ ತಾಳ್ಮೆ  ಇದ್ದಾರೆ ಒಮ್ಮೆ ಹೋಗಿ ಸಿನಿಮಾ ನೋಡಿ......

Friday, 26 November 2010

ಪದೇ ಪದೇ ಕಿತ್ತೋಗುವ ದೋಸೆಗಳು....

ಚುಮು ಚುಮು ಚಳಿ, ಜೊತೇಲಿ ರೋಡ್ ಸೈಡ್ ಕೂತು ಕಾಯೋ ಪಜೀತಿ ಬೇರೆ, ಮುಂದ್ದೆ ಫುಲ್ ಫ್ಯಾಶನ್ ಶೋ ಮತ್ತು ಕ್ಯಾಟ್ ವಾಕ್. ನಿಯತ್ತು ಅನ್ನೋದು ನನ್ನಿಂದ ಸದಾ ದೂರ ಅಂತ ನೀನೇಳೋ ಮಾತು ನೆನಪಾಗಿ ನಗು ಬಂತು. ಅಂತು ಇಂತು ಕೊನೆಗೂ ಗಜ ಪ್ರಸವವಾಗಿ ನಮ್ಮ ದೀಪು ಬಂದ್ರು..... ಜುಮ್ಮ್ ಅಂತ ಬೈಕ್ ನಲ್ಲಿ ಕೂತ್ಕೊಂಡು ನೈಸ್ ರೋಡ್ ನಲ್ಲಿ ನೈಸ್ ಆಗಿ ಸಿದ್ದಗಂಗಾ ಮಠ ತಲುಪಿದ್ವಿ.
 ಒಂದು ಸಲ ಮೈ ಜುಮ್ಮ್ ಅಂತು.........ಇಲ್ಲೇ ಅಲ್ಲವ ನಾನ್ ನಿನ್ನ ಮೊದಲಸಲ ನೋಡಿದ್ದು, ನೀನ್ ನಿನ್ ಅಮ್ಮನ ಕೈ ಹಿಡ್ಕೊಂಡು ಫ್ರಾಕ್ ಹಾಕೊಂಡು ಪುಟ್ಟ ಪುಟ್ಟ ಹೆಜ್ಜ ಹಾಕ್ತಾ  ಒಳ್ಳೆ ರಾಜಕುಮಾರಿ ಹಾಗೆ ನಡ್ಕೊಂಡು ಬರ್ತಿದ್ದ್ರೆ......ನನ್ ಕಣ್ಣ ಕ್ಯಾಮೆರಾ ಫ್ರೆಮ್ಮ್ ನಲ್ಲಿ ಬರಿ ನೀನ್ ಮಾತ್ರ ಇದ್ದೆ, ಆದ್ರೆ ಯಾವಾಗಾ ನಮ್ಮ ಅಪ್ಪ ಬನ್ನಿ ಮೇಡಂ ಬನ್ನಿ ಅಂತ ಜೋರಾಗಿ ಹೇಳೋದ್ರೋ ಆವಾಗಲೇ ನನ್ ಗಮನ ನಿನ್ ಅಮ್ಮನ ಕಡೆ ಹೋಗಿದ್ದು, ನಂಗೆ ಫುಲ್ ಶಾಕ್ , ಫಸ್ಟ್ ಬಾಯ ಮುಚ್ಕೊಂಡೆ, ಹಾಗೆ ಗಂಟಲಲ್ಲಿ ಉಗುಳು ನುಂಗುತ ನಿಮಮ್ಮುನೆ ನೋಡ್ತಾ ಇದ್ದೆ, ನೀನ್ ನೋಡುದ್ರೆ ಗೊಳ್  ಅಂತ ನಕ್ಕ ಬಿಡೋದ, ದೇವರಾಣೆಗೂ ನೀನ್ ಅವತು ಯಾವ ಕಾರಣಕ್ಕೆ ನಕ್ಕ್ದೆ ಅನ್ನೋದು ನಂಗೆ ಇವತ್ತಿಗೂ ಪ್ರೆಶ್ನೆ ಆಗೇ ಉಳ್ಕೊಂದ್ದುಬಿಟ್ಟಿದೆ, ನನ್ ಗಾಬರಿ ಆಗಿದ್ದು ಕಂಡ ನೀನ್ ನಕ್ಕಿದ ಅಂತ ನಂಗೆ ಇವತ್ತುಗ್ ಅನುಮಾನ, ತುಂಬಾ ಸಲ ನಿನ್ನ ಕೇಳಬೇಕು ಅನ್ನ್ಕೊಂಡೆ ಆದ್ರೂ ಕೇಳಕಾಗಿಲ್ಲ......  ಅತ್ತೇನ ಕಂಡ್ರೆ ನಂಗೆ ತುಂಬಾ ಭಯ, ನಾನೊಬ್ಬನೇ ಅಲ್ಲ ಶಾಲೇಲಿ ಎಲ್ಲರೂ ಭಯಪಡ್ತ್ಹಿದ್ದ್ರು. ಅವರಿಗೆ  ನಿನ್ನಷ್ಟು ಮುದ್ದಾದ ಮಗಳಿದಾಳೆ ಅಂತ ನಂಗೆ ಗೊತ್ತೆ ಇರ್ಲಿಲ್ಲ,...... ನಿಂಗೊತ್ತ ನಾವಿಬ್ಬರು ಜೂಟಾಟ ಆಡಿದ್ವಲ್ಲ ಆ ಕಲ್ಯಾಣ ಮಂಟಪದಲ್ಲೇ ನಮ್ ಮದ್ವೆ ಅಂತ ದೀಪುಗೆ allready invite ಕೂಡ ಮಾಡಿದ್ದೀನಿ .....


ತುಂಬಾ ವರ್ಷಗಳ ನಂತರ ನನ್ ಹಳೆ ಗೆಳೆಯ ಮಂಜುನಾಥ ನೆನಪಾದ, ನಾನು ಇಲ್ಲಿಂದ ಹಾಸನಕ್ಕೆ ಹೋದಾಗ ಸಿಕ್ಕಿದ ಗೆಳೆಯ ಅವನು, ತುಂಬಾ ದೊಡ್ಡ ಮನಸಿನ ಮನುಷ್ಯ, ಎಂಥ ವಿಪರ್ಯಾಸ ನೋಡು ನಾನು ತುಮಕೂರು   ಬಿಟ್ಟು ಹಾಸನಕ್ಕೆ ಹೋದೆ ಆತ ಹಾಸನ ಬಿಟ್ಟು ತುಮಕೂರಿಗೆ ಬಂದ, ನಾವಿಬ್ಬರು ಒಂದೇ ಬಾಕ್ಸ್ನಲ್ಲಿ  ಉಟ ಮಾಡ್ಕೊಂಡು ಬೆಳ್ದವ್ರು, ನಾವೇನು ತುಂಬಾ ವರ್ಷ ಒಟ್ಟಿಗೆ ಇರ್ಲಿಲ್ಲ ನಾನು ಇಲ್ಲಿ ನಿನ್ನ ಬಿಟ್ಟು ಹಾಸನಕ್ಕೆ ಹೋದಾಗ 4ನೇ ತರಗತಿಗೆ ಅಲ್ಲಿ ಸಿಕ್ಕಿದ್ದ ಅವನು, 6ನೇ ತರಗತಿಗೆ ಅವನು ಇಲ್ಲಿ ಮಠಕ್ಕೆ ಬಂದ. 2 ವರ್ಷ ಒಟ್ಟಿಗೆ ಇದ್ದ್ವಿ.... ಆದಾದ ಮೇಲು  ತುಂಬಾ ವರ್ಷ ಅವನಿಗೆ ಪತ್ರ ಬರಿತಿದ್ದೆ ಅವಾಗೆಲ್ಲ ನಿನ್ನ ನೆನಪು ಬರ್ತಿತ್ತು, ಪತ್ರ ಬರ್ಯೋಣ ಅಂದ್ರೆ  ನಿನ್ನ ವಿಳಾಸನು  ಇರ್ಲಿಲ್ಲ......


 ಮನೆಗೆ ಬಂದವನು ದೋಸೆ ಮಾಡೋಕೂದ್ರೇ  ನಿನ್ನ ಹಾಗೆ ಬಂತು ದೋಸೆಗಳೆಲ್ಲ, ನಿಜಕ್ಕೂ ಆಡಿಗೆ ಮಾಡೋದು ತುಂಬಾ ಮಜಾ ಇರುತ್ತೆ, ಏನೋ ಒಂಥರಾ ತಮಾಷೆ, ಯಡವಟ್ಟು, ಒಂಥರಾ ಮೊದಲ ಬರಿ ಹುಡ್ಗಿಗೆ ಪ್ರೇಮಪತ್ರ ಬರದ ಹಾಗೆ, ಹಾಳಾದ ದೋಸೆಗಳು ಎಷ್ಟೋ ಗೊತ್ತಿಲ್ಲ.............
 ಮತ್ತೆ ಮತ್ತೆ ನಿಂಗೆ ಗಿಫ್ಟ್ ತಂದು ಕೊಟ್ಟು ಮುದ್ದ್ ಮಾಡಿ ನಿಂಗೆ ಮೆಳ್ಗಣ್ಣು  ಇಲ್ಲ ಅಂತ ಹೇಳಿ ನಿನ್ನ ಒಪ್ಪ್ಸೋವಷ್ಟ್ತೆ  ಕಷ್ಟ್ಟ ಆಯ್ತು ಈ ದೋಸೆ ಮಾಡೋದು...... ಅಂತು ಇಂತು ದೋಸೆ ಏನೋ ಮಾಡ್ದೆ ಆದ್ರೆ ಇದು ದೋಸೆನ ಇಲ್ಲ ರೊಟ್ಟಿನ ? ಅನ್ನೋ ಅನುಮಾನ ಇನ್ನು ಕಾಡ್ತಾ ಇದೆ ಮೊದಲಸಲ ನೀ ನಕ್ಕ ಹಾಗೆ.......


Tuesday, 23 November 2010

ಕಳೆದು ಹೋದ ಕನಸುಗಳನ್ನು ಹುಡುಕುತ್ತಾ


ನೀನ್ ತಿರುಗ್ ನೋಡಲ್ಲ ಅಂತ ಗೊತ್ತು ಆದ್ರೂ ನಿನ್ನೆ ನೋಡ್ತಾ ಕೂತಿದ್ದೀನಿ, ಬೆಳಗ್ಗೆ ಎದ್ದರೆ ಜಿಟಿ ಜಿಟಿ ಮಳೆ, ನಿಂಗೆ ಗೊತ್ತು ನಂಗೆ ಮಳೆಲಿ ನೆನದರೆ ಆಗಲ್ಲ ತುಂಬಾ ಬೇಗ ನೆಗಡಿ ಆಗುತ್ತೆ ಆದ್ರೂ ಈ ನಡುವೆ ಮಳೆ ಜೊತೆ ಒಪ್ಪಂದ ಮಾಡ್ಕೋಬಿಟ್ಟಿದೀನಿ ನೆಗಡಿ ಕಡಮೆ ಆಗಿದೆ. ನೀನ್ ಆ ಚಿಕ್ಕ ಮಗುನ ಎತ್ಕೊಂಡು ಅದರ ಮೂತಿ ಒರಸ್ತಾ ಓಡಾಡ್ತಿದ್ದ್ರೆ ನಗು ಬರುತ್ತೆ. ಯೆಷ್ಟ್ತ್ ವರ್ಷ ಆಯ್ತು....... ಲೆಕ್ಕ ಇಬ್ಬರು ಇಟ್ಟಿಲ್ಲ ಆದ್ರೆ ಇದು ನವೆಂಬರ್ ಅಂತ ನಂಗೆ ಮಾತ್ರ ನೆನಪಿದೆ.  

ಬಾ ನೋಡು ಗೆಳತಿ ನವಿಲು ಗರಿಯೂ ಮರಿಹಾಕಿದೆ......

ನಿಂಗೆ ಗೊತ್ತ ಕನಸುಗಳು ಮರಿಹಾಕ್ತವೆ, ಆದ್ರೆ ಅದ್ದುನೆಲ್ಲ ಜೋಪಾನ ಮಾಡೋದೇ ಕಷ್ಟ್ಟ. ಮತ್ತೆ ಮೊನ್ನೆ ಒಂದಷ್ಟು ಕನಸುಗಳು ಕಳ್ದೊಗಿದಾವೆ, ಎಲ್ಲಿ ಅಂತ ಹುಡುಕಲಿ ಯಾರನ ಅಂತ ಕೇಳ್ಲಿ ?