Tuesday, 23 November 2010

ಕಳೆದು ಹೋದ ಕನಸುಗಳನ್ನು ಹುಡುಕುತ್ತಾ


ನೀನ್ ತಿರುಗ್ ನೋಡಲ್ಲ ಅಂತ ಗೊತ್ತು ಆದ್ರೂ ನಿನ್ನೆ ನೋಡ್ತಾ ಕೂತಿದ್ದೀನಿ, ಬೆಳಗ್ಗೆ ಎದ್ದರೆ ಜಿಟಿ ಜಿಟಿ ಮಳೆ, ನಿಂಗೆ ಗೊತ್ತು ನಂಗೆ ಮಳೆಲಿ ನೆನದರೆ ಆಗಲ್ಲ ತುಂಬಾ ಬೇಗ ನೆಗಡಿ ಆಗುತ್ತೆ ಆದ್ರೂ ಈ ನಡುವೆ ಮಳೆ ಜೊತೆ ಒಪ್ಪಂದ ಮಾಡ್ಕೋಬಿಟ್ಟಿದೀನಿ ನೆಗಡಿ ಕಡಮೆ ಆಗಿದೆ. ನೀನ್ ಆ ಚಿಕ್ಕ ಮಗುನ ಎತ್ಕೊಂಡು ಅದರ ಮೂತಿ ಒರಸ್ತಾ ಓಡಾಡ್ತಿದ್ದ್ರೆ ನಗು ಬರುತ್ತೆ. ಯೆಷ್ಟ್ತ್ ವರ್ಷ ಆಯ್ತು....... ಲೆಕ್ಕ ಇಬ್ಬರು ಇಟ್ಟಿಲ್ಲ ಆದ್ರೆ ಇದು ನವೆಂಬರ್ ಅಂತ ನಂಗೆ ಮಾತ್ರ ನೆನಪಿದೆ.  

ಬಾ ನೋಡು ಗೆಳತಿ ನವಿಲು ಗರಿಯೂ ಮರಿಹಾಕಿದೆ......

ನಿಂಗೆ ಗೊತ್ತ ಕನಸುಗಳು ಮರಿಹಾಕ್ತವೆ, ಆದ್ರೆ ಅದ್ದುನೆಲ್ಲ ಜೋಪಾನ ಮಾಡೋದೇ ಕಷ್ಟ್ಟ. ಮತ್ತೆ ಮೊನ್ನೆ ಒಂದಷ್ಟು ಕನಸುಗಳು ಕಳ್ದೊಗಿದಾವೆ, ಎಲ್ಲಿ ಅಂತ ಹುಡುಕಲಿ ಯಾರನ ಅಂತ ಕೇಳ್ಲಿ ?