ಒಂದು ಸಲ ಮೈ ಜುಮ್ಮ್ ಅಂತು.........ಇಲ್ಲೇ ಅಲ್ಲವ ನಾನ್ ನಿನ್ನ ಮೊದಲಸಲ ನೋಡಿದ್ದು, ನೀನ್ ನಿನ್ ಅಮ್ಮನ ಕೈ ಹಿಡ್ಕೊಂಡು ಫ್ರಾಕ್ ಹಾಕೊಂಡು ಪುಟ್ಟ ಪುಟ್ಟ ಹೆಜ್ಜ ಹಾಕ್ತಾ ಒಳ್ಳೆ ರಾಜಕುಮಾರಿ ಹಾಗೆ ನಡ್ಕೊಂಡು ಬರ್ತಿದ್ದ್ರೆ......ನನ್ ಕಣ್ಣ ಕ್ಯಾಮೆರಾ ಫ್ರೆಮ್ಮ್ ನಲ್ಲಿ ಬರಿ ನೀನ್ ಮಾತ್ರ ಇದ್ದೆ, ಆದ್ರೆ ಯಾವಾಗಾ ನಮ್ಮ ಅಪ್ಪ ಬನ್ನಿ ಮೇಡಂ ಬನ್ನಿ ಅಂತ ಜೋರಾಗಿ ಹೇಳೋದ್ರೋ ಆವಾಗಲೇ ನನ್ ಗಮನ ನಿನ್ ಅಮ್ಮನ ಕಡೆ ಹೋಗಿದ್ದು, ನಂಗೆ ಫುಲ್ ಶಾಕ್ , ಫಸ್ಟ್ ಬಾಯ ಮುಚ್ಕೊಂಡೆ, ಹಾಗೆ ಗಂಟಲಲ್ಲಿ ಉಗುಳು ನುಂಗುತ ನಿಮಮ್ಮುನೆ ನೋಡ್ತಾ ಇದ್ದೆ, ನೀನ್ ನೋಡುದ್ರೆ ಗೊಳ್ ಅಂತ ನಕ್ಕ ಬಿಡೋದ, ದೇವರಾಣೆಗೂ ನೀನ್ ಅವತು ಯಾವ ಕಾರಣಕ್ಕೆ ನಕ್ಕ್ದೆ ಅನ್ನೋದು ನಂಗೆ ಇವತ್ತಿಗೂ ಪ್ರೆಶ್ನೆ ಆಗೇ ಉಳ್ಕೊಂದ್ದುಬಿಟ್ಟಿದೆ, ನನ್ ಗಾಬರಿ ಆಗಿದ್ದು ಕಂಡ ನೀನ್ ನಕ್ಕಿದ ಅಂತ ನಂಗೆ ಇವತ್ತುಗ್ ಅನುಮಾನ, ತುಂಬಾ ಸಲ ನಿನ್ನ ಕೇಳಬೇಕು ಅನ್ನ್ಕೊಂಡೆ ಆದ್ರೂ ಕೇಳಕಾಗಿಲ್ಲ...... ಅತ್ತೇನ ಕಂಡ್ರೆ ನಂಗೆ ತುಂಬಾ ಭಯ, ನಾನೊಬ್ಬನೇ ಅಲ್ಲ ಶಾಲೇಲಿ ಎಲ್ಲರೂ ಭಯಪಡ್ತ್ಹಿದ್ದ್ರು. ಅವರಿಗೆ ನಿನ್ನಷ್ಟು ಮುದ್ದಾದ ಮಗಳಿದಾಳೆ ಅಂತ ನಂಗೆ ಗೊತ್ತೆ ಇರ್ಲಿಲ್ಲ,...... ನಿಂಗೊತ್ತ ನಾವಿಬ್ಬರು ಜೂಟಾಟ ಆಡಿದ್ವಲ್ಲ ಆ ಕಲ್ಯಾಣ ಮಂಟಪದಲ್ಲೇ ನಮ್ ಮದ್ವೆ ಅಂತ ದೀಪುಗೆ allready invite ಕೂಡ ಮಾಡಿದ್ದೀನಿ .....
ಮನೆಗೆ ಬಂದವನು ದೋಸೆ ಮಾಡೋಕೂದ್ರೇ ನಿನ್ನ ಹಾಗೆ ಬಂತು ದೋಸೆಗಳೆಲ್ಲ, ನಿಜಕ್ಕೂ ಆಡಿಗೆ ಮಾಡೋದು ತುಂಬಾ ಮಜಾ ಇರುತ್ತೆ, ಏನೋ ಒಂಥರಾ ತಮಾಷೆ, ಯಡವಟ್ಟು, ಒಂಥರಾ ಮೊದಲ ಬರಿ ಹುಡ್ಗಿಗೆ ಪ್ರೇಮಪತ್ರ ಬರದ ಹಾಗೆ, ಹಾಳಾದ ದೋಸೆಗಳು ಎಷ್ಟೋ ಗೊತ್ತಿಲ್ಲ.............
ಮತ್ತೆ ಮತ್ತೆ ನಿಂಗೆ ಗಿಫ್ಟ್ ತಂದು ಕೊಟ್ಟು ಮುದ್ದ್ ಮಾಡಿ ನಿಂಗೆ ಮೆಳ್ಗಣ್ಣು ಇಲ್ಲ ಅಂತ ಹೇಳಿ ನಿನ್ನ ಒಪ್ಪ್ಸೋವಷ್ಟ್ತೆ ಕಷ್ಟ್ಟ ಆಯ್ತು ಈ ದೋಸೆ ಮಾಡೋದು...... ಅಂತು ಇಂತು ದೋಸೆ ಏನೋ ಮಾಡ್ದೆ ಆದ್ರೆ ಇದು ದೋಸೆನ ಇಲ್ಲ ರೊಟ್ಟಿನ ? ಅನ್ನೋ ಅನುಮಾನ ಇನ್ನು ಕಾಡ್ತಾ ಇದೆ ಮೊದಲಸಲ ನೀ ನಕ್ಕ ಹಾಗೆ.......