Sunday, 30 September 2012

ಏಕಾಂಗಿ


ದೀಪಗಳ ಸಾಲಿನಲಿ ಬೆಳಕಿಲ್ಲ,
ಸಂಪಿಗೆಯ ತೋಟದಲಿ ಘಮವಿಲ್ಲ,
ಎಣ್ಣೆ ಇಲ್ಲದ ದೀಪ, ಜೀವವಿಲ್ಲದ ದೇಹ,
ಹುಣ್ಣಿಮೆಯ ರಾತ್ರಿಯಲಿ ಚಂದಿರನ ಹುಡುಕಾಟ,
ಬಳಿ ಇದ್ದು ಬಹುದೂರ ನೀನೀಗ,
ಜೊತೆ ಇದ್ದು ಏಕಾಂಗಿ ನಾನಾಗ...

Tuesday, 28 August 2012

ಶಾರ್ಕು


ಪ್ರೀತಿಯೆಂಬ ಸಾಗರಕ್ಕೆ
ಮನವು ನನ್ನ ಸೆಳದಿದೆ,
ಅದರ ಒಳಗೆ ಅವಿತು ಕುಳಿತ
ಶಾರ್ಕು ನೀನು ಎಂದು
ಪಾಪ ಅದಕೆ ತಿಳಿಯದೆ.

Thursday, 5 April 2012

ಗರ್ಭಪಾತ

ಬದುಕಲು ಸಾವಿರ ಕಾರಣ ಬೇಕು,
ಮರಣಕೆ ಅವಳ ನೆನಪೆ ಸಾಕು.
ಸುಂದರ ಸುಮಧುರ ನೆನಪಿನ ಜಾತ್ರೆ,
ನಲ್ಲೆಯ ಜೊತೆಗಿನ ಪ್ರೀತಿಯ ಯಾತ್ರೆ.
ನೆದಿರೆಯ ಮರೆತು ರಾತ್ರಿಯ ಕಳೆದೆ,
ಕನಸಿನ ಕೂಸಿಗೆ ಬಣ್ಣವ ಬಳಿದೆ.
ರಾತ್ರಿಯು ಕಳೆದು ಬೆಳಕು ಹರಿಯೆ
ಕನಸಿನ  ಕೂಸಿಗೆ ಗರ್ಭಪಾತ.

ಮಳೆ




ಪ್ರೇಮಿಗಳಿಗೆ;
ಗುಡುಗು, ಮಿಂಚು, ಮೋಡ, ಮಳೆ,
ಮುಗಿಲು ಧರೆಗೆ ಮುತ್ತಿಕುವ ಹಾಗೆ,
ವಿರಹಿಗಳಿಗೆ;
ಮೌನ ಮುರಿದು ಭೋರಿಟ್ಟು ಅಳುವ
ವರುಣ ದೇವನ ಕಣ್ಣೀರ ದಾರೆ.

ಬೇಸಿಗೆ




ಮುಂಜಾನೆ ಮುಸ್ಸಂಜೆ
ಸೂರ್ಯ ತಂಪು ತಂಪು,
ಮಧ್ಯಾನ ತಾಪಕ್ಕೆ
ನಾವೆಲ್ಲ ಕೆಂಪು ಕೆಂಪು.

Monday, 2 April 2012

ಅನಾಮಿಕ


ಮನದ ಕಡಲಿನ ಮೇಲೆ ತೇಲುವ
ನಿನ್ನ ನೆನಪಿನ ದೋಣಿಯು,
ತೇಲಲಾರದೆ ಮುಳುಗಲಾರದೆ
ಕಡಲ ನಡುವಲಿ ನಿಂತಿದೆ,
ನಟ್ಟ ನಡುವಲಿ ಕೆಟ್ಟು ನಿಂತಿರೊ
ಎದೆಯ ದೋಣಿಗೆ ನಾವಿಕ,
ನಿನ್ನ ಪ್ರೀತಿಗೆ ಕಾದು ಕುಳಿತಿರೊ
ನಾ ನಿನ್ನ ಪಾಲಿಗೆ ಅನಾಮಿಕ.

Sunday, 1 April 2012

ಮೂರು ಜಡೆಯ ಮುದ್ದು ರಾಕ್ಷಸಿ...





ಕಾಲಿ ಕೂತಾಗ ನನಗೆ ತಲೆಯಲ್ಲಿ ಮೆದುಳೆ ಇಲ್ಲವೇನೊ ಅಂತ ಅನ್ನಿಸೋಕೆ ಶುರುವಾಗುತ್ತೆ, ನೀನ್ ಬರೊಲ್ಲ ಸರಿ, ಆದರೆ ನಿನ್ನ ನೆನಪ್ನನಾದ್ರು ಕಳಿಸಬಹುದಲ್ಲ. ನಮ್ಮಿಬರ ಸಂಬಂದ ಒಂಥಾರ ನಿಂತು ನಿಂತು ಸಾಗೊ ಸಿಟಿ ಬಸ್ಸಿನ ಹಾಗೆ, ನೀನೆ Driver ನಾನೆ Conductor, ಪ್ರತಿ ಸಾರಿ ನೀನು ಬಸ್ಸು ನಿಲ್ಲಿಸಿದಾಗಲು ನನಗೆ ಎದೆ ಡವ ಡವ ಅನ್ನೊಕೆ ಶುರುವಾಗುತ್ತೆ, ಯ್ಯಾರಾರೊ ಒಳಗೆ ಹತ್ತಿ ಬರ್ತಾರೆ, ನಮ್ಮಿಬರಿಗು ಎಕಾಂತ ಭಂಗ, ಹತ್ತಿದವರನ್ನೆಲ್ಲ ನಾನು ಕೇಳೋದು ಒಂದೆ ಪ್ರೆಶ್ನೆ "ಎಲ್ಲಿಗೆ" ಅವರು ಎಲ್ಲಿ ಇಳಿತಾರೆ, ಮತ್ತೆ ಯಾವಗ ನಮ್ಮಿಬರಿಗು ಎಕಾಂತ ಸಿಗುತ್ತೆ ಅನ್ನೊದಷ್ಟೆ ನನ್ನ ತಲೆಲಿ ತುಂಬಿಕೊಂಡಿರುತ್ತೆ. ಪ್ರತಿ stopನಲ್ಲು ಯಾರಾದ್ರು ಇಳಿತಾರೇನೊ ಅಂತ ಆಸೆ ಕಣ್ಣಗಳಿಂದ ನೋಡತ್ತೀನಿ ಆದ್ರೆ ಪಾಪಿಗಳು  ಇನ್ನಷ್ಟು ಜನ ಒಳಕ್ಕೆ ಹತ್ತಿ ಬರ್ತಾರೆ....................... ಜೀವನದ ಕೊನೆ ನಿಲ್ದಾಣಾ ಬರೊ ವರಗು ಈ ಸಮಸ್ಯೆ ತಪ್ಪಿದ್ದಲ್ಲ, ನಮ್ಮಿಬರ ಮಧ್ಯೆ ಅದೆಷ್ಟೆ ಜನ ಬಂದು ಹೋದರು ನಮ್ಮ ಪ್ರೀತಿ ಮಾತ್ರ ಯಾವತ್ತು ಹೀಗೆ ಇರಲಿ......

ಟಿಕೆಟ್ ಟಿಕೆಟ್ ಟಿಕೆಟ್..... :)