Monday, 2 April 2012

ಅನಾಮಿಕ


ಮನದ ಕಡಲಿನ ಮೇಲೆ ತೇಲುವ
ನಿನ್ನ ನೆನಪಿನ ದೋಣಿಯು,
ತೇಲಲಾರದೆ ಮುಳುಗಲಾರದೆ
ಕಡಲ ನಡುವಲಿ ನಿಂತಿದೆ,
ನಟ್ಟ ನಡುವಲಿ ಕೆಟ್ಟು ನಿಂತಿರೊ
ಎದೆಯ ದೋಣಿಗೆ ನಾವಿಕ,
ನಿನ್ನ ಪ್ರೀತಿಗೆ ಕಾದು ಕುಳಿತಿರೊ
ನಾ ನಿನ್ನ ಪಾಲಿಗೆ ಅನಾಮಿಕ.

2 comments:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ವಾರೆವಾ..!! ಸರ್.. ಸಕತ್ ಕಿಕ್ ಇದೆ ಈ ಪುಟ್ಟ ಕವಿತೆಯಲ್ಲಿ .. ಜೀವನದ ಪ್ರೇಮಲೋಕದಲ್ಲಿ ಪ್ರೇಮಿಯ ಅರ್ಥವನ್ನು ವರ್ಣಿಸಿದ ಕಲ್ಪನೆಯ ಸೃಷ್ಟಿ ಸಾಲುಗಳ ಸೊಗಸನು ಎಷ್ಟು ಹೊಗಳಿದರೂ ಕಮ್ಮಿಯೇ.. ನಾನಿಲ್ಲಿ ನಿಮಗೆ ಅಪರಿಚಿತ .. ಆದರೆ ನಿಮ್ಮ ಕವಿತೆಯ ಪ್ರತೀ ಪದಗಳು ಚಿರಪರಿಚಿತ .. & ಶುಭ ಮುಂಜಾನೆ .. ಶುಭದಿನ ಸರ್.. :)

ಉದಯ್ ಶಂಕರ್ ಕೆ. ಎಂ. said...

ದನ್ಯವಾದಗಳು Prashanth P Khatavakar :)